LIBRARY AND INFORMATION CENTRE

UNIVERSITY OF AGRICULTURAL SCIENCES

ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ - ಕನ್ನಡ ನಿಘಂಟು (ಪರಿಷ್ಕ್ರತ) ಸಂಪುಟ 1-4 ಏಕೀಕೃತ ಸಂಪುಟ - ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, 2007. - xiii, 1544 ಪುಟ - Mysooru Viswavidyanilayada English - Kannada Nighantu, Ekeekrutha Samputa .

ಭಾರತೀಯ ಭಾಷೆಗಳಲ್ಲೇ ಇಷ್ಟು ಸಮಗ್ರವಾದ, ಬೃಹತಾದ ದ್ವಿಭಾಷಾ ನಿಘಂಟು ಪ್ರಾಯಶಃ ಬೇರೊಂದಿಲ್ಲ. ಈ ಏಕೀಕೃತ ಸಂಪುಟದಲ್ಲಿ 1,06,946 ಇಂಗ್ಲೀಷ್ ಪದಗಳಿಗೆ ಅರ್ಥ ನೀಡಲಾಗಿದೆ. ಸುಮಾರು 11,936 ವೈಜ್ಞಾನಿಕ ಹಾಗೂ ತಾಂತ್ರಿಕ ಪದಗಳು ಸೇರಿವೆ; 1,629 ಚಿತ್ರಗಳಿವೆ. ಇತ್ತೀಚಿನ ಸಾಮಾನ್ಯ ಪದಗಳು, ವೈಜ್ಞಾನಿಕ ಹಾಗೂ ತಾಂತ್ರಿಕ ಪದಗಳ ಸೇರ್ಪಡೆಯಿಂದ ಇದು ಅತ್ಯಾಧುನಿಕ ನಿಘಂಟಾಗಿದೆ. ಜನ್ಯಪದಗಳನ್ನೂ ಒಂದೇ ಪದದಂತೆ ಪ್ರಯೋಗವಾಗುವ ಸಮಸ್ತ ಹಾಗೂ ಅರೆ-ಸಮಸ್ತ ಪದಗಳನ್ನೂ ಪ್ರಧಾನ ಪದಗಳಾಗಿ ದಾಖಲೆ ಮಾಡಿದೆ. ಪದಗುಚ್ಛಗಳನ್ನೂ ನುಡಿಗಟ್ಟುಗಳನ್ನೂ ಹೆಚ್ಚು ಸಂಖ್ಯೆಯಲ್ಲಿ ಆಯಾ ಪದದಡಿಯಲ್ಲಿ ಪ್ರತ್ಯೇಕವಾಗಿ ನೀಡಿ, ಅವುಗಳಿಗೆ ಪ್ರಯೋಗಗಳನ್ನು ವಿಪುಲವಾಗಿ ಕೊಡಲಾಗಿದೆ. ಉಚ್ಚಾರಣಾಭೇಧಗಳನ್ನು ಹೇರಳವಾಗಿ ಕೊಡಲಾಗಿದೆ. ನಿಘಂಟಿನ ಒಡಲಲ್ಲೇ ಸಂಕ್ಷಿಪ್ತಗಳನ್ನೂ ಸಂಕೇತಗಳನ್ನೂ ಅಳವಡಿಸಲಾಗಿದೆ. ಅಮೆರಿಕನ್ ಕಾಗುಣಿತಗಳನ್ನು ಕೊಡಲಾಗಿದೆ.


ಇಂಗ್ಲೀಷ್ - ಕನ್ನಡ ನಿಘಂಟು

494.31482 / MUD

Hosted by GKVK Library | Powered by Koha